ಕೌಟುಂಬಿಕತೆ ಮತ್ತು ಬ್ರಷ್ಥಾಚಾರ

“ದುಡ್ಡೇ ದೊಡ್ಡಪ್ಪ” ಎಂಬ ಮಾತಿನಂತೆ, ದೈನಂದಿನ ಜೀವನ ಸುಗಮವಾಗಿ ಸಾಗಿಸವಲ್ಲಿ ಹಣದ ಪಾತ್ರ ಬಹುಮುಖ್ಯ. ವರ್ಷಗಳು ಕಳೆದಂತೆ  ಬದುಕಿನ ಶೈಲಿ ಬದಲಾಗುತ್ತಿದೆ. ಉತ್ತಮ ಹಾಗು ಐಶಾರಾಮಿ ಜೀವನ ಶೈಲಿಗಾಗಿ ಅವಶ್ಯಕವಾದ ಎಲ್ಲಾ ವಸ್ತೋಪಕರ್ಣಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದನ್ನೆಲ್ಲಾ ತಮ್ಮದಾಗಿಸಿಕೊಂಡು ಜೀವನ ಶೈಲಿಯನ್ನು ಉತ್ತಮಗೊಲಿಸಿಕೊಳ್ಳಬೇಕಾದರೆ ಹಣ ಬೇಕು. ಮನುಷ್ಯ ಕೌಟುಂಬಿಕ ಜೀವಿ. ಕೇವಲ ತನಗಷ್ಟೇ ಅಲ್ಲದೆ ಕುಟುಂಬದ ಎಲ್ಲ ಸದಸ್ಯರಿಗೂ ಎಟುಕುವಂತೆ ಮಾಡುವ ಜವಾಬ್ದಾರಿ ಕುಟುಂಬದ ಮುಖ್ಯಸ್ತನ ಮೇಲಿರುತ್ತದೆ.

ನಾವು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕಲ್ಲವೇ? ಕುಟುಂಬದ ಸದಸ್ಯರಾಗಿ ಇದನ್ನು ನಾವು ಅರಿಯಬೇಕು. ಕೇವಲ ಐಶಾರಮಿ ಜೀವನದಿಂದಷ್ಟೇ ಸುಖ ಕಾಣಲು ಸಾಧ್ಯವಿಲ್ಲ, ನ್ಯಾಯವಾಗಿ ಗಳಿಸಿದ ಹಣದಿಂದ ಎಷ್ಟು ಸಾದ್ಯವೋ ಅಷ್ಟರಲ್ಲೇ ಉತ್ತಮ ಜೀವನ ನಡೆಸಬೇಕು ಎಂಬುದನ್ನು ಅರಿಯದಿದ್ದರೆ ಅದರ ನೇರವಾದ ಪರಿಣಾಮ ಹಾಗು ಒತ್ತಡ ಮುಖ್ಯಸ್ತನ ಮೇಲೆ ಬೀಳುತ್ತದೆ. ಇಂತಹ ಸಂದರ್ಬದಲ್ಲಿ ಹೆಚ್ಚು ಹಣ ಗಳಿಸಲು ನ್ಯಾಯವಾದ ದಾರಿಗಳು ಕಾಣದಿದ್ದಾಗ ಮನುಷ್ಯ ಬ್ರಷ್ಟಾಚಾರಕ್ಕೆ ಕೈಹಾಕದೆ ಇರುವನೇ?
ಹೀಗಿರುವಾಗ ಕೌಟುಂಬಿಕತೆಯ ತಳಹದಿಯೂ ಬ್ರಷ್ಥಾಚಾರಕ್ಕೆ ಮೂಲ ಎನ್ನಲು ಸಾಧ್ಯವೇ? 

೨೦೧೧ರ ಜನಗಣತಿ ಪ್ರಕಾರ ಭಾರತದಲ್ಲಿ ಸುಮಾರು ೭೦% ರಷ್ಟು ಕುಟುಂಬಗಳಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದಾರೆ. ಅದರಲ್ಲಿ ಸುಮಾರು ೮೦% ರಷ್ಟು ಕುಟುಂಬಗಳು ಏಕ ಸದಸ್ಯನ ಅದಾಯದಮೇಲೆ ಅವಲಂಬಿತವಾಗಿದೆ. ಅಷ್ಟರಲ್ಲೇ ಕುಟುಂಬದ ಎಲ್ಲ ಅವಶ್ಯಕತೆಗಳನ್ನು ಪುರೈಸಬೀಕು. ಆಹಾರ, ಮನೆ, ಮಕ್ಕಳ ವಿದ್ಯಾಭ್ಯಾಸ, ಇತ್ಯಾದಿ. ಇದು ಮುಗಿಯದ ಪಟ್ಟಿ. ಅಷ್ಟೆಲ್ಲ ಆದಮೇಲೆ ಮಕ್ಕಳಿಗೆ ಒಂದಷ್ಟು ಆಸ್ತಿ ಬಿಟ್ಟುಹೋಗದಿದ್ದರೆ ಮಕ್ಕಳ ಹಾಗು ಸಮಾಜದ ದೃಷ್ಟಿಯಲ್ಲಿ ಒಳ್ಳೆಯ ಪೋಷಕರು ಎಂದೆನಿಸಿಕೊಳ್ಳರು. ಇಂತಹ ಆರ್ಥಿಕ ಒತ್ತಡಗಳು ಮನುಷ್ಯನನ್ನು ದುರ್ಮಾರ್ಗಕ್ಕೆ ಕೈ ಹಾಕಲು ಪ್ರೇರೇಪಿಸುತ್ತವೆ.

ಕುಟುಂಬದ ಎಲ್ಲ ಸದಸ್ಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಮಕ್ಕಳಲ್ಲಿ ಸ್ವಾವಲಂಬನೆ ಮತ್ತು ಸ್ವಾಬಿಮಾನ ಬೆಳೆಯುವಂತೆ ಶಿಕ್ಷಣವನ್ನು ರೂಪಿಸಬೇಕು. ಪಿತ್ರಾರ್ಜಿತ ಆಸ್ತಿ ಯಮೇಲೆ ಅವಲಂಬಿಸದೆ, ಸ್ವಂತ ದುಡಿಮೆಯಮೇಲೆ ಬದುಕುವ ಬಗೆ ರೂಪಿಸಬೇಕು. ನಮ್ಮ ಇಷ್ಟಾರ್ಥಗಳು ಹಾಗು ಏನೇ ಗುರಿಗಲಿದ್ದರು, ನಮ್ಮ ಸ್ವಂತ ಶ್ರಮದಿಂದ ಪೂರೈಸಿಕೊಳ್ಳುವುದೇ ನಿಜವಾದ ಗುರಿ ಸಾದಿಸಿದಂತೆ.

- ಆದರ್ಶ್ ಬಿ ಎಂ

No comments:

Post a Comment