ಚಿಕ್ಕವನಿದ್ದಾಗ ಒಂದಿನ ಅದೇ ಮೊದ್ಲು ಮನೆಗೆ ದೂರದರ್ಶನ ಬಂದಿದ್ದು. ಅದು ಕಪ್ಪು-ಬಿಳಿಪಿನದಾಗಿತ್ತು. ನಾವೆಲ್ಲಾ ಕುತೂಹಲ ಹಾಗು ಕಾತುರದಿಂದ ಅದ್ರಲ್ಲಿ ಬರ್ತಿದ್ದ ಮಕ್ಕಳ ಕಾರ್ಯಕ್ರಮ ಸಂಗೀತ ಕಾರ್ಯಕ್ರಮ ಸಿನಿಮಾ ಹಾಡುಗಳು ಸಮಾಚಾರ ಗಳನ್ನೂ ನೋಡ್ತಿದ್ವಿ. ಅವಾಗೆಲ್ಲಿ ಕನ್ನಡ ಕಾರ್ಯಕ್ರಮಗಳು? ಬರ್ತಿದ್ದಿದ್ದು ಒಂದೇ ಚಾನಲ್ಲು. ಏನ್ ಬರುತ್ತೋ ಅದುನ್ನೇ ನೋಡೋದು. ಹಿಂದಿ ಅರ್ಥ ಆಗ್ದಿದ್ರೂ ಚಪಲದಿಂದ ನೋಡ್ತಿದ್ವಿ. ನೋಡಿ ನೋಡಿ ಒಂದ್ ಮಟ್ಟಕ್ಕೆ ಹಿಂದಿ ಅರ್ಥ ಆಗೋಕೆ ಶುರುವಾಯಿತು ಅಂದ್ಕೊಳ್ಳಿ. 1991 ಅಲ್ಲಿ ಕನ್ನಡದ ಚಂದನ ಕಾರ್ಯಕ್ರಮಗಳು ಶುರುವಾದ್ರೂ, ಇಡೀ ದಿನ ಹಿಂದಿ ಕಾರ್ಯಕ್ರಮಗಳ ಮದ್ಯೆ ಒಂದೆರಡು ಗಂಟೆಯಷ್ಟೇ ಕನ್ನಡ ಕಾರ್ಯಕ್ರಮ ಬರ್ತಿತ್ತು. 2000 ದ ನಂತರ ಚಂದನ ಬೇರೊಂದು ಚಾನಲ್ಲಾಗಿ ತರಲಾಯಿತು. ಹಿಂದಿ ದೂರದರ್ಶನ ಶುರುವಾಗಿದ್ದು 1959 ರಲ್ಲಿ. ಅದಾಗಿ 40 ವರ್ಷ ಬೇಕಾಯಿತು ಕನ್ನಡದ ಚಾನಲ್ ಬರೋಕೆ. ಇಷ್ಟೊತ್ತಿಗಾಗ್ಲೆ ನನ್ಮೇಲೆ ಧಾರಾಕಾರವಾಗಿ ಹಿಂದಿಯ ಸುರಿಮಳೆ ಆಗಿಹೋಗಿತ್ತು. ಮಾತೃ ಭಾಷೆಯಲ್ಲಿ ಮನರಂಜನೆ ಪಡೆಯೋದ್ರಿಂದ ವಂಚಿತರಾಗಿದ್ದಂತೂ ನಿಜ.
ಇಷ್ಟೊತ್ತಿಗೆ ನಾನು ಪ್ರೌಢಶಾಲೆ ಸೇರಿದೆ. ಪ್ರೌಢಶಾಲೆಗೆ ಬಂದಾಗ ಕನ್ನಡ ಆಂಗ್ಲ ಭಾಷೆಯ ಜೊತೆಗೆ ಹಿಂದಿ, ಒಟ್ಟು ಮೂರು ಭಾಷೆ ಕಲಿಯಲೇ ಬೇಕು ಅಂತ ಗೊತ್ತಿತ್ತು. ನಮ್ಮ ಹಿರಿಯ ವಿದ್ಯಾರ್ಥಿಗಳು ತಿಳಿಸಿದ್ದರು. ನಮಗೆ ತಿಳಿದೋ ತಿಳಿಯದೆನೋ ಹಿಂದಿನ ದೇಶದಲ್ಲಿ ಎಲ್ಲರು ಕಲೀಲೇಬೇಕು ಅನ್ನೋ ಭಾವನೆ ಹುಟ್ಟಿಕೊಂಡಿತ್ತು. ಮಾತೃ ಭಾಷೆಯಾದ್ರಿಂದ ಕನ್ನಡ, ಅಂತರ್ರಾಷ್ಟ್ರೀಯ ಭಾಷೆಯಾದ್ರಿಂದ ಆಂಗ್ಲ.
ಇನ್ನು ಹಿಂದಿ ಯಾಕೆ ಕಲಿತಿದೀವಿ ಅನ್ನೋ ದೀರ್ಘಾಲೋಚನೆ ಆವತ್ತು ಮಾಡ್ದಿದ್ರು, ಒಂದು ರೀತಿಯಲ್ಲಿ ಹಿಂದಿ ಭಾರತದಲ್ಲಿ ಅತ್ಯಂತ ಪ್ರಚಲಿತವಾದ ಭಾಷೆ ಆದ್ರಿಂದ ಹಿಂದಿ ಕಲಿಯಲೇಬೇಕು ಅನ್ನೋರೀತಿಯಲ್ಲಿ ಭಿಮ್ಬಿತವಾಗಿದ್ದು ನಿಜ. ಈ ಹಿಂದೆ 40 ವರ್ಷಗಳ ಕಾಲ ಹಿಂದಿ ದೂರದರ್ಶನ ಮತ್ತು ಆಕಾಶವಾಣಿ ಗಳು ಹಿಂದಿಯನ್ನು ಪ್ರಚಲಿತ ಗೊಳಿಸುವಲ್ಲಿ ಒಳ್ಳೆ ಕೆಲಸ ಮಾಡಿದ್ವು ಅಂತ ಇಟ್ಕೊಳಿ.
ಇನ್ನು ಹಿಂದಿ ಯಾಕೆ ಕಲಿತಿದೀವಿ ಅನ್ನೋ ದೀರ್ಘಾಲೋಚನೆ ಆವತ್ತು ಮಾಡ್ದಿದ್ರು, ಒಂದು ರೀತಿಯಲ್ಲಿ ಹಿಂದಿ ಭಾರತದಲ್ಲಿ ಅತ್ಯಂತ ಪ್ರಚಲಿತವಾದ ಭಾಷೆ ಆದ್ರಿಂದ ಹಿಂದಿ ಕಲಿಯಲೇಬೇಕು ಅನ್ನೋರೀತಿಯಲ್ಲಿ ಭಿಮ್ಬಿತವಾಗಿದ್ದು ನಿಜ. ಈ ಹಿಂದೆ 40 ವರ್ಷಗಳ ಕಾಲ ಹಿಂದಿ ದೂರದರ್ಶನ ಮತ್ತು ಆಕಾಶವಾಣಿ ಗಳು ಹಿಂದಿಯನ್ನು ಪ್ರಚಲಿತ ಗೊಳಿಸುವಲ್ಲಿ ಒಳ್ಳೆ ಕೆಲಸ ಮಾಡಿದ್ವು ಅಂತ ಇಟ್ಕೊಳಿ.
ಇಷ್ಟೆಲ್ಲಾ ಆಂಗ್ಲ-ಹಿಂದಿ ಭಾಷೆಗಳ ಪ್ರಭಾವಗಳಿದ್ರೂ, ನನ್ನ ಕನ್ನಡ ಪ್ರೇಮ ಏನು ಕಮ್ಮಿ ಆಗಿರ್ಲಿಲ್ಲ. ಸಹಿ ಹಾಕೋದ್ರಿಂದ ಹಿಡಿದು ವಾಹನ ನೊಂದಣಿ ಸಂಖ್ಯೆಯ ವರೆಗೆ, ಸಾಧ್ಯಯಾದಷ್ಟು ಕನ್ನಡದ ಬಳಕೆ ಮಾಡ್ತಿದ್ದೆ. ಕಾಲೇಜು ಗೆ ಬಂದ್ಮೇಲೆ ಹಿಂದಿ ಪಥ್ಯಗಳಿಂದ ಹೊರಗಿತ್ತು. ಅಬ್ಬ, ಒಂದು ಭಾಷೆ ಓದೋದು ಕಮ್ಮಿ ಆಯಿತು ಅನ್ಕೊಂಡಿದ್ದು ಸುಳ್ಳಲ್ಲ. ಕಾಲೇಜಿನ ಪಠ್ಯದಲ್ಲಿ ಹಿಂದಿ ಇಲ್ದಿದ್ರೂ ಹೊರಗಡೆ ಎಲ್ಲಿ ಹೋದ್ರು ಹಿಂದಿ ಎದುರಾಗೋದು ತಪ್ತಿರ್ಲಿಲ್ಲ. ಉಗಿಬಂಡಿಗಳಲ್ಲಿ, ಸರಕಾರೀ ಖಚೇರಿಗಳಲ್ಲಿ, ಬ್ಯಾಂಕು ಗಳಲ್ಲಿ, ಕೆಲವು ಅಂಗಡಿ ಮುಂಗಟ್ಟುಗಳಲ್ಲಿ, ಇತ್ಯಾದಿ. ಹಿಂದಿ ಇಲ್ಲಿ ಯಾಕೆ ನೋಡ್ತಿದೀವಿ ಅನ್ನೋ ಪ್ರಶ್ನೆನೂ ನಂಗೆ ಆವತ್ತು ಬಂದಿರ್ಲಿಲ್ಲ. ಅಷ್ಟರಮಟ್ಟಿಗೆ ನನ್ನ ಮೇಲೆ ಚಿಕ್ಕವನಿಂದ ಹಿಂದಿ ಪ್ರಭಾವ ಬೀರಿತ್ತು, ಅಥವಾ ಹೇರಲಾಗಿತ್ತು. ತಮಿಳು ನಾಡಿನಿಂದ ಬಂದ ಕೆಲವು ಸ್ನೇಹಿತರು ಹಿಂದಿಯ ಬಗ್ಗೆ ಅಸಡ್ಡೆ ತೂರಿದಾಗ, ನಾನು ಹಿಂದಿಯ ಪರವಾಗಿ ಅವರಿಗೆ ಭೂದನೆ ನೀಡಿದ್ದು ಮರೆತಿಲ್ಲ. ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಅನ್ನೋ ಭ್ರಮೆ ನನ್ನ ತಲೆಯಲ್ಲಿ ಕೂತಿತ್ತು. ಭಾರತೀಯರೆಂದಮೇಲೆ ಹಿಂದಿ ಗೊತ್ತಿರಲೇಬೇಕು ಅನ್ನೋ ಭಾವನೆ, ಯಾಕೆ ಅಂತ ಗೊತ್ತಿಲ್ಲ.
ಕೆಲಸಕ್ಕೆ ಬೆಂಗಳೂರಿಗೆ ಬಂದಾಗ ಕನ್ನಡದ ಪ್ರೀತಿ ಹಿಂದೆಂದೂ ಇಲ್ದಿದ್ದು ಈಗ ಶುರುವಾಗಿರೋ ಭಾವನೆ. ವಲಸಿಗರು ಅನ್ಯ ಭಾಷೆಗಳಲ್ಲಿ ಮಾತನಾಡಿದಾಗ ಕನ್ನಡದಲ್ಲಿ ಉತ್ರ ಕೊಟ್ಟು ಹೆಮ್ಮೆ ಪಡ್ತಿದ್ವಿ. ಯಾವುದೇ ಭಾಷೆಯ ಇರೋಧಿಯಲ್ಲ, ಕರ್ನಾಟಕದಲ್ಲಿ ಜೀವನ ಸಗ್ಸೋರು ಕನ್ನಡದಲ್ಲಿ ಮಾತಾಡ್ಲಿ ಅನ್ನೋ ಧ್ಯೆಯೆಯ. ಹೀಗಿರುವಾಗ ಒಂದ್ ವಿಷ್ಯ ನನ್ನನ್ನ ಆಕರ್ಷಿಸಿದ್ದು, ಅಂತರ್ಜಾಲದಲ್ಲಿ ಕೆಲವು ಸ್ನೇಹಿತರು “Stop Hindi Imposition (ಹಿಂದಿ ಹೇರಿಕೆ ನಿಲ್ಲಿಸಿ)” “Stop Hindi Imperialism (ಹಿಂದಿ ಸಾಮ್ರಾಜ್ಯಶಾಹಿ ನಿಲ್ಲಿಸಿ)” ಅನ್ನೋ ಘೋಷಣೆಗಳನ್ನು ಹಾಕಿಕೊಂಡಿದ್ದು. ಚಿಕ್ಕವನಿಂದ ಹಿಂದಿನ ಕಿವಿಮೇಲೆ ಬೀಳುಸ್ಕೊಂಡೆ ಬೆಳೆದೋನು, ಕನ್ನಡ ಪ್ರೇಮಿಯಾದ್ರು ಭಾರತೀಯನಾದ್ಮೇಲೆ ಹಿಂದಿ ಗೊತ್ತಿರಲೇಬೇಕು ಅನ್ನೋ ಭಾವನೆ ಬೆಳೆಸಿಕೊಂಡಿದ್ದು, ಗೊತ್ತಿದ್ದೋ ಗೊತ್ತಿಲ್ದೇನೂ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಂದ್ಕೊಂಡಿದ್ದೋನು, ಈ ರೀತಿಯ ಘೋಷಣೆಗಳನ್ನ ನೋಡಿ ಆಶ್ಚರ್ಯಚಕಿತನಾದೆ. ಇವರ್ಯಾರಪ್ಪಾ ತಲೆಗಿಲೆ ಕೆಟ್ಟಿದಿಯ? ಹೀಗ್ಯಾಕೆ ರಾಷ್ಟ್ರೀಯ ಭಾಷೆ ವಿರೋದುಸ್ತೀರಾ ಅಂತ ಕೇಳ್ದಗ ಬಂಡ ಉತ್ತರ ನನ್ನ ಕುತೂಹಲನ ಹೆಚ್ಚಿಸಿತು. “ಹಿಂದಿ ರಾಷ್ಟ್ರ ಭಾಷೆನ? ಯಾವ ದೇಶದ್ದು?” ಅರೆ, ಚಿಕ್ಕವನಿಂದ ನಾನು ಅನ್ಕೋಡಿದ್ದು ಒಂದು, ಇವರು ಏನೋ ಹೇಳ್ತಾರಲ್ಲ! ತಲೆಹರಟೆಗಳು, ಒಂದು ಭಾಷೆಯನ್ನು ವಿರೋಧಿಸೋ ತಿಮಿಂಗಲಗಳು. ಭಾರತ ಸರ್ಕಾರದ ಆಡಳಿತ ಭಾಷೆಯಾಗಿದ್ದು, ಶಾಲೆಗಳ ಫಥ್ಯದಿಂದ ಹಿಡಿದು ಬಾಲಿವುಡ್ ಸಿನಿಮಾ ವರೆಗೂ ತಮಿಳುನಾಡು ಹೊರೆತುಪಡಿಸಿ ದೇಶದ ಎಲ್ಲ ಭಾಗದವರು ಸ್ವೀಕರಿಸಿರುವಾಗ ಇವರದೇನು ಹುಚ್ಚಾಟ? ಅದು ರಾಷ್ಟ್ರ ಭಾಷೆ ಅಲ್ಲ ಅನ್ನಲು ಸಾಧ್ಯನಾ ಅನ್ನೋ ಗೊಂದಲದ ಪ್ರಶ್ನೆ ಕಾಡ್ತಿತ್ತು. ಈ ಪ್ರಶ್ನೆಗೆ ಉತ್ತರ ಹುಡಿಕಿಕೊಂಡು ಹೋದಾಗ ಸಿಕ್ಕಿದ್ದು - ೨೦೧೦ ರಲ್ಲಿ ಗುಜರಾತ್ ನ್ಯಾಯಾಲಯದ ತೀರ್ಪು: “ಭಾರತಕ್ಕೆ ಯಾವುದೇ ರಾಷ್ಟ್ರ ಭಾಷೆ ಇಲ್ಲ” ಯಂಬುದು. ಸಂವಿಧಾನದ ಲೇಖನ ೩೪೩ ರ ಪ್ರಕಾರ ಹಿಂದಿ ಮತ್ತು ಆಂಗ್ಲ ಭಾರತ ಸರ್ಕಾರದ ಅಧಿಕೃತ ಭಾಷೆಗಳು. ರಾಷ್ಟ್ರೀಯ ಭಾಷೆಯ ಬಗ್ಗೆ ಸಂವಿಧಾನದಲ್ಲಿ ಯಾವ ಪ್ರಸ್ತಾಪವೂ ಆಗಿಲ್ಲ. ಯಾವುದೊಂದು ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ಕೊಟ್ರೆ ಉಳಿದ ಭಾಷೆಗಳಿಗೆ ಅನ್ಯಾಯವಾಗ್ಬಹುದು ಅಂತಾನೋ ಯೇನೊ.
ಹಾಗಾದ್ರೆ ಹಿಂದಿಗೆ ಇಷ್ಟೊಂದು ಪ್ರಾಧಾನ್ಯತೆ ಕೊಟ್ಟಿದ್ದು ಯಾಕೆ? ಹಿಂದಿಯೇ ರಾಷ್ಟ್ರ ಭಾಷೆ ಅಂತ ಭಿಮ್ಬಿಸುವ ತ್ರಿಭಾಷಾ ಸೂತ್ರವನ್ನು ಜಾರಿಗೆತಂದಿದ್ದು ಯಾಕೆ? ಭಾರತಕ್ಕೆ ರಾಷ್ಟ್ರ ಭಾಷೆ ಇಲ್ಲ ಅನ್ನುವ ವಿಷಯವನ್ನು ಅದರ ಕಾರಣಗಳನ್ನು ನಮ್ಮ ಶಾಲೆಗಳಲ್ಲಿ ಯಾಕೆ ಕಳಿಸಲಾಗಿಲ್ಲ? ಕರ್ನಾಟಕದ ಮಧ್ಯಭಾಗದ ಒಂದು ಪುಟ್ಟ ಊರಿನಲ್ಲಿರುವ ನನಗೆ ಹಿಂದಿಯ ಅವಶ್ಯಕತೆ ಇಲ್ದಿದ್ರೂ ಕಲೀಲೇಬೇಕು ಅನ್ನೋ ಖಡ್ಡಾಯ ಯಾಕೆ? ಇದೆಲ್ಲ ಭಾರತ ಸರ್ಕಾರ ನಮ್ಮ ಮೇಲೆ ಮಾಡ್ತಿರೋ ಬಲವಂತದ ಹೇರಿಕೆನಾ? ಕೇವಲ ಸರ್ಕಾರದ ಅಧಿಕೃತ ಭಾಷೆಯಾದ್ರಿಂದ ಎಲ್ಲರೂ ಕಲಿಯಲೇ ಬೇಕಾ?
ಹಾಗಾದ್ರೆ ಹಿಂದಿಗೆ ಇಷ್ಟೊಂದು ಪ್ರಾಧಾನ್ಯತೆ ಕೊಟ್ಟಿದ್ದು ಯಾಕೆ? ಹಿಂದಿಯೇ ರಾಷ್ಟ್ರ ಭಾಷೆ ಅಂತ ಭಿಮ್ಬಿಸುವ ತ್ರಿಭಾಷಾ ಸೂತ್ರವನ್ನು ಜಾರಿಗೆತಂದಿದ್ದು ಯಾಕೆ? ಭಾರತಕ್ಕೆ ರಾಷ್ಟ್ರ ಭಾಷೆ ಇಲ್ಲ ಅನ್ನುವ ವಿಷಯವನ್ನು ಅದರ ಕಾರಣಗಳನ್ನು ನಮ್ಮ ಶಾಲೆಗಳಲ್ಲಿ ಯಾಕೆ ಕಳಿಸಲಾಗಿಲ್ಲ? ಕರ್ನಾಟಕದ ಮಧ್ಯಭಾಗದ ಒಂದು ಪುಟ್ಟ ಊರಿನಲ್ಲಿರುವ ನನಗೆ ಹಿಂದಿಯ ಅವಶ್ಯಕತೆ ಇಲ್ದಿದ್ರೂ ಕಲೀಲೇಬೇಕು ಅನ್ನೋ ಖಡ್ಡಾಯ ಯಾಕೆ? ಇದೆಲ್ಲ ಭಾರತ ಸರ್ಕಾರ ನಮ್ಮ ಮೇಲೆ ಮಾಡ್ತಿರೋ ಬಲವಂತದ ಹೇರಿಕೆನಾ? ಕೇವಲ ಸರ್ಕಾರದ ಅಧಿಕೃತ ಭಾಷೆಯಾದ್ರಿಂದ ಎಲ್ಲರೂ ಕಲಿಯಲೇ ಬೇಕಾ?
- ಆದರ್ಶ್ ಭ ಮ
No comments:
Post a Comment